Sonu Srinivas Gouda : ಬಿಗ್‌ಬಾಸ್‌ OTT ಗೆ ಎಂಟ್ರಿ ಕೊಟ್ಟ ಸೋನು ಶ್ರೀನಿವಾಸ್ ಗೌಡ!

ಮೊದಲ ಅಭ್ಯರ್ಥಿಯಾಗಿ ಆರ್ಯವರ್ಧನ್ ಗುರೂಜಿ‌ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದರ ಜೊತೆಗೆ 2ನೇ ಅಭ್ಯರ್ಥಿಯಾಗಿ ಸೋನು ಶ್ರೀನಿವಾಸ್ ಗೌಡ ಆಯ್ಕೆಯಾಗಿದ್ದಾರೆ.

Written by - Malathesha M | Last Updated : Aug 7, 2022, 10:28 AM IST
  • ಬಿಗ್‌ಬಾಸ್ ಕನ್ನಡ ಒಟಿಟಿ ಸೀಸನ್-1 ಇಂದು ಆರಂಭ
  • ಮೊದಲ ಅಭ್ಯರ್ಥಿಯಾಗಿ ಆರ್ಯವರ್ಧನ್ ಗುರೂಜಿ‌
  • 2ನೇ ಅಭ್ಯರ್ಥಿಯಾಗಿ ಸೋನು ಶ್ರೀನಿವಾಸ್ ಗೌಡ ಆಯ್ಕೆಯಾಗಿದ್ದಾರೆ.
Sonu Srinivas Gouda : ಬಿಗ್‌ಬಾಸ್‌ OTT ಗೆ ಎಂಟ್ರಿ ಕೊಟ್ಟ ಸೋನು ಶ್ರೀನಿವಾಸ್ ಗೌಡ! title=

ಬಿಗ್‌ಬಾಸ್ ಹೊಸ ವರ್ಷನ್‌ಗೆ ಇಂದು ಚಾಲನೆ ಸಿಕ್ಕಿದ್ದು, ಬಹುನಿರೀಕ್ಷಿತ ಬಿಗ್‌ಬಾಸ್ ಕನ್ನಡ OTT ಸೀಸನ್-1 ನಟ ಕಿಚ್ಚ ಸುದೀಪ್‌ ಅವರ ಸಾರಥ್ಯದಲ್ಲಿ ಭರ್ಜರಿಯಾಗಿ ಆರಂಭವಾಗಿದೆ. ಮೊದಲ ಅಭ್ಯರ್ಥಿಯಾಗಿ ಆರ್ಯವರ್ಧನ್ ಗುರೂಜಿ‌ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದರ ಜೊತೆಗೆ 2ನೇ ಅಭ್ಯರ್ಥಿಯಾಗಿ ಸೋನು ಶ್ರೀನಿವಾಸ್ ಗೌಡ ಆಯ್ಕೆಯಾಗಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಹಲವು ಕಾಂಟ್ರವರ್ಸಿಗಳ ಮೂಲಕ ಸದ್ದು ಮಾಡಿದ್ದ ಸೋನು ಶ್ರೀನಿವಾಸ್ ಗೌಡ ಆಯ್ಕೆ ಬಗ್ಗೆ ಬಿಸಿಬಿಸಿ ಚರ್ಚೆ ಶುರು ಆಗಿದೆ. ಒಂದೆಡೆ ಸೋನು ಶ್ರೀನಿವಾಸ್ ಗೌಡ ಆಯ್ಕೆ ತಪ್ಪು ಎಂಬ ಮಾತುಗಳು ಕೇಳಿ ಬರುತ್ತಿದ್ದರೆ, ಇನ್ನೊಂದು ಕಡೆ ಬಿಗ್‌ಬಾಸ್‌ ಮನೆಗೆ ಸೋನು ಶ್ರೀನಿವಾಸ್ ಗೌಡ ಆಯ್ಕೆ ಸರಿ ಅಂತಲೂ ಕೆಲವರು ಬೆಂಬಲಿಸುತ್ತಿದ್ದಾರೆ.

ಇದನ್ನೂ ಓದಿ : ಬಿಗ್‌ಬಾಸ್ ಒಟಿಟಿ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ‌ ಎಂಟ್ರಿ!

ಎಂಟ್ರಿಯಲ್ಲೇ ಶಾಕ್..!‌

ಸೋನು ಶ್ರೀನಿವಾಸ್ ಗೌಡ ಬಿಗ್‌ಬಾಸ್‌ಗೆ ಆಯ್ಕೆಯಾದ ಹಿನ್ನೆಲೆ ವೇದಿಕೆಗೆ ಬರಮಾಡಿಕೊಂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು,  ಸೋನುಗೆ ಕಲೆ ಪ್ರಶ್ನೆ ಕೇಳಿದ್ರು. ಇನ್ನು ಕಿಚ್ಚ ಸುದೀಪ್ ಅವರ ಪ್ರಶ್ನೆಗಳಿಗೆ ಉತ್ತರ ನೀಡಿದ ಸೋನು ಶ್ರೀನಿವಾಸ್ ಗೌಡಗೆ ಟಾಂಗ್‌ ಕೊಟ್ಟರು‌ ನಟ ಕಿಚ್ಚ ಸುದೀಪ್. ಹೀಗೆ ಎಂಟ್ರಿಯಲ್ಲೇ ಶಾಕ್‌ ಆದ ಸೋನು ಶ್ರೀನಿವಾಸ್ ಗೌಡ ಬಿಗ್‌ಬಾಸ್‌ ಮನೆಯನ್ನ ಸೇರಿದ್ದು ಈಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯ ಸಂಚಲನವನ್ನೇ ಸೃಷ್ಟಿ ಮಾಡಿದೆ.

ಬಿಗ್‌ಬಾಸ್ OTT ಸೀಸನ್-1ರ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ‌ ಎಂಟ್ರಿ ಕೊಟ್ಟರೆ, 2ನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ್ ಗೌಡ ಎಂಟ್ರಿ ಕೊಟ್ಟಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಕಾಂಟ್ರವರ್ಸಿಗಳ ಮೂಲಕ ಹೆಸರು ಮಾಡಿದ್ದ ಸೋನು ಶ್ರೀನಿವಾಸ್ ಗೌಡ ಇದೀಗ ಬಿಗ್‌ಬಾಸ್‌ ಮನೆ ಸೇರಿದ್ದು, ಬಿಗ್‌ಬಾಸ್‌ ಮನೆಯಲ್ಲಿ ಏನ್‌ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿ ಮಾಲಾಶ್ರೀ ಮಗಳು ಚಿತ್ರರಂಗಕ್ಕೆ ಎಂಟ್ರಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News